ಭಾನುವಾರ, ಏಪ್ರಿಲ್ 22, 2012

ಡೊನೇಷನ್ ಹಾವಳಿ ನಿಯಂತ್ರಿಸುವಂತೆ ಒತ್ತಾಯಿಸಿ ಎಸ್.ಎಫ್.ಐ ಪ್ರತಿಭಟನೆ

ಡೊನೇಷನ್ ಹಾವಳಿ ನಿಯಂತ್ರಿಸುವಂತೆ ಒತ್ತಾಯಿಸಿ ಎಸ್.ಎಫ್.ಐ ಪ್ರತಿಭಟನೆ ಡೊನೇಷನ್ ಹಾವಳಿ ನಿಯಂತ್ರಿಸುವಂತೆ ಒತ್ತಾಯಿಸಿ ಎಸ್.ಎಫ್.ಐ ಪ್ರತಿಭಟನೆ ಜಿಲ್ಲಯಯಲ್ಲಿರು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೋನೇಷನ್ ಹಾವಳಿ ವ್ಯಾಪಕವಾಗಿ ನಡೆಯುತ್ತಿದೆ.ಎಂದು ಆರೋಪಿಸಿ ಭಾರತ ವಿದ್ಯಾಥರ್ಿ ಫೆಡರೇಷನ್ (ಎಸ್.ಎಫ್.ಐ) ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಛೆರಿ ಮುಂದೆ ಪ್ರತಿಭಟನೆ ನಡೆಸಿದರು. ಪ್ರವೇಶಾತಿ ಸಂದರ್ಭದಲ್ಲಿ ಖಾಸಗಿ ಶಾಲೆಗಳು ಸರಕಾರಿ ನಿಯಮಗಳನ್ನು ಗಾಳಿಗೆ ತೂರಿ ಮನಸೋ ಇಚ್ಚೆ ಹಣವನ್ನು ಪಾಲಕರಿಂದ ಸುಲಿಗೆ ಮಾಡುತ್ತಿವೆ. ಎಲ್.ಕೆ.ಜಿ ಗೆ ಪ್ರವೇಶ ಪಡೆಯಲು 20 ರಿಂದ 40 ಸಾವಿರ ರೂಹಣವನ್ನು ಪಡೆಯುತ್ತಿದ್ದಾರೆ. ಗಂಗಾವತಿಯ ಚೈತನ್ಯ ಪಬ್ಲಿಕ್ ಶಾಲೆಯಲ್ಲಿ ಬೇಬಿ ಕ್ಲಾಸ್ ಗೆ 44.480 ರೂ ಹಣ ಪಡೆಯಲಾಗುತ್ತಿದೆ ಸರಕಾರಿ ನಿಯಮ ಉಲ್ಲಂಘಿಸಿರುವ ಈ ಶಾಲೆಯ ಮೇಲೆ ಶಿಸ್ಥಿನ ಕ್ರಮ ಜರುಗಿಸಬೇಕು. ಕೊಪ್ಪಳದ ಸ್ವಾಮಿವಿವೇಕಾಂದ ಖಾಸಿಗಿ ಶಾಲೆಯಲ್ಲಿ 25000 ರೂ ಡೊನೇಷನ್ ಪಡೆಯಲಾಗುತ್ತಿದೆ. ಅದಕ್ಕಾಗಿ ಪ್ರಗತಿ ಹಾರ್ಡವೇರ್ ನಲ್ಲಿ ಡೀಲಿಂಗ್ ಮಾಡಲಾಗುತ್ತಿದೆ.ಇದಕ್ಕೇನು ಕ್ರಮವನ್ನು ಕೈಗೊಳ್ಳುತ್ತಿರಿ ಎಂದು ಜಿಲ್ಲಾಧ್ಯಕ್ಷ ಗುರುರಾಜ್ ದೇಸಾಯಿ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಜಿಲ್ಲಾ ಉಪಾಧ್ಯಕ್ಷ ಅಮರೇಶ್ ಕಡಗದ್ ಮಾತನಾಡಿ ಪ್ರವೇಶಾತಿ ಸಂದಭದಲ್ಲಿ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಪರಿಕ್ಷೆಗಳನ್ನು ನಡೆಸುತ್ತಿದ್ದಾರೆ. ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳು 20ರಿಂದ 60 ಸಾವಿರ ರೂ ಹಣ ಪಡೆಯುವ ಮೂಲಕ ಶಿಕ್ಷಣವನ್ನು ವ್ಯಾಪಾರದ ಸಗಟಾಗಿ ನಿಮರ್ಾಣ ಮಾಡಿದ್ದಾರೆ. ಸೀಟುಗಳು ಭತರ್ಿಯಾಗಿವೆ ಎಂದು ಪಾಲಕರಿಂದ ಹೆಚ್ಚವರಿ ಹಣ ಪಡೆಯುವಲ್ಲಿ ಖಾಸಗಿ ಶಾಲೆಗಳು ನಿರತವಾಗಿವೆ. ಖಾಸಗಿ ಶಾಲೆಗಳಲ್ಲಿ ಡೋನೇಷನ್ ಹಾವಳಿ ಹೆಚ್ಚಾಗಿರುವುದು ಶಿಕ್ಷಣ ಇಲಾಯ ಗಮನಕ್ಕೆ ಬಂದಿದ್ದರು, ಶಿಕ್ಷಣ ಇಲಾಖೆ ಮೌನವಹಿಸಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಎಂದು ಆರೋಪಿಸಿದರು. 1986 ಶಿಕ್ಷಣ ಕಾಯ್ದೆ ಪ್ರಕಾರ ಡೊನೇಷನ್ ಹಾವಳಿ ನಿಯಂತ್ರಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ‘ಡೋನೇಷನ್ ವಿರೋಧಿ ಸಮಿತಿ’ ರಚಿಸುವಂತೆ ಹೇಳಿದೆ ಆದರೆ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿಲ್ಲ. ಹಾಗಾಗಿ ಖಾಸಗಿ ಶಾಲೆಗಳಿಗೆ ಮೂಗುದಾರವಿಲ್ಲದೆ ಪಾಲಕರಿಂದ ಹಣಸುಲಿಗೆಯಲ್ಲಿ ನಿರತರಾಗಿದ್ದಾರೆ. ಡೊನೇಷನ್ ಹಾವಳಿ ನಿಯಂತ್ರಿಸುವಂತೆ ಮತ್ತು ಡೊನೇಷನ್ ವಿರೋಧಿಸಮಿತಿ ರಚಿನೆ ಮಾಡಬೇಕು ಎಂದು ಜಿಲ್ಲಾ ಮುಖಂಡ್ ದುರಗೇಶ್ ಡಗ್ಗಿ ಆಗ್ರಹಿಸಿದರು. ಡೋನೆಷನ್ ಹಾವಳಿ ನಿಯಂತ್ರಿಸಬೇಕು ಮತ್ತು ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿ ಡೋನೇಷನ್ ವಿರೋಧಿ ಸಮಿತಿ ರಚಿಸಬೇಕು.ಅನಧಿಕೃತ ಖಾಸಗಿ ಶಾಲೆಗಳ ಮಾನ್ಯತೆಯನ್ನು ರದ್ದು ಪಡಿಸಬೇಕು. ಭಾಷಾ ನೀತಿ ಉಲ್ಲಂಘಿಸುವ ಖಾಸಗಿ ಶಾಲೆಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳು ಸರಕಾರಿ ನಿಯಮದಂತೆ ಶುಲ್ಕ ಪಡೆಯಬೇಕು ಮತ್ತು ಶುಲ್ಕದ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಯುವಂತೆ ನೋಟಿಸ್ ಬೋರ್ಡಗೆ ಹಾಕಬೇಕು. ನಿಯಮ ಉಲ್ಲಂಘಿಸಿ ಶುಲ್ಕ ಪಡೆದಿರುವ ಖಾಸಗಿ ಶಾಲೆಗಳ ಮೇಲೆ ಕಾನೂನು ಕ್ಮ ಜರುಗಿಸಬೇಕು.ಎಸ್.ಎಫ್.ಐ ಮುಖಂಡರು, ಪಾಲಕರನ್ನು ಒಳಗೊಂಡತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಡೋನೆಷನ್ ವಿರೋಧಿಸಮಿತಿ ರಚಿಸಬೇಕು. ಎಂಬ ಬೇಡಿಕೆಗಳುಳ್ಳ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ಪ್ರತಿಭಟನೆಯ ನೇತ್ರತವವನ್ನು ಜಿಲ್ಲಾ ಕಾರ್ಯದಶರ್ಿ ಗ್ಯಾನೇಶ್ ಕಡಗದ್, ಹನಮಂತ ಭಜಂತ್ರಿ, ಸುಬಾನ್ ಸಯ್ಯದ್, ಮಂಜುನಾಥ ಡಗ್ಗಿ, ರಸೂಲ್, ಯಮನೂರ್, ಆನಂದ್ ಹಿರೇಮನಿ. ಲಕ್ಷಣ್, ಹನಮಯ್ಯ ಹನಮೇಶ್ ವಡಿಕಿ ಸೇರಿದಂತೆ ಅನೇಕ ಜನ ಹಾಜರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ