ಶನಿವಾರ, ಏಪ್ರಿಲ್ 7, 2012
ಬೇಸಿಗೆ ರಜೆಗೆ ಒತ್ತಾಯಿಸಿ ಎಸ್.ಎಫ್,ಐನಿಂದ ಸಹಿಸಂಗ್ರಹ ಚಳುವಳಿ
ಬೇಸಿಗೆ ರಜೆಗೆ ಒತ್ತಾಯಿಸಿ ಎಸ್.ಎಫ್,ಐನಿಂದ ಸಹಿಸಂಗ್ರಹ ಚಳುವಳಿ
ಐ.ಟಿ.ಐ ಕಾಲೇಜುಗಳಿಗೆ ಬೇಸಿಗೆ ರಜೆ ನೀಡುವಂತೆ ಒತ್ತಾಯಿಸಿ ಭಾರತ ವಿದ್ಯಾಥರ್ಿ ಫೆಡರೇಷನ್(ಎಸ್.ಎಫ್.ಐ) ಕಾರ್ಯಕರ್ತರು ಇಂದು (07.04.12) ನಗರದಲ್ಲಿರುವ ಐ.ಟಿ.ಐ ಕಾಲೇಜಿಗೆ ತೆರಳಿ ಸಹಿ ಸಂಗ್ರಹ ಚಳುವಳಿ ನಡೆಸಿದರು.
ಸಹಿ ಸಂಗ್ರಹ ಚಳುವಳಿ ಉದ್ಘಾಟಿಸಿ ಮಾತನಾಡಿದ, ಎಸ್.ಎಫ್,ಐ ರಾಜ್ಯ ಉಪಾಧ್ಯಕ್ಷ ಗುರುರಾಜ್ ದೇಸಾಯಿ, ಬೇರೆ ಬೇರೆ ಕೋರ್ಸಗಳಿಗೆ ರಜೆ ನೀಡುವಂತೆ ಐ.ಟಿ.ಐ ಕಾಲೇಜುಗಳಿಗೆ ರಜೆ ನೀಡಬೇಕು. ಮಲೆನಾಡಿನಲ್ಲಿ ಮಳೆಗಾಲದಲ್ಲಿ ರಜೆ ನೀಡುವಂತೆ ಬೇಸಿಗೆ ಸಂದರ್ಭದಲ್ಲಿ ಈ ಭಾಗದ ವಿದ್ಯಾಥರ್ಿಗಳಿಗೆ ರಜೆ ನೀಡಬೇಕು. ಒಂದು ಕೋಸರ್ಿಗೆ ಬೆಣ್ಣೆ ಇನ್ನೊಂದು ಕೋಸರ್ಿಗೆ ಸುಣ್ಣವೆಂಬಂತೆ ಸರಕಾರ ಐ.ಟಿ.ಐ ಕಾಲೇಜುಗಳನ್ನು ನಿರ್ಲಕ್ಷ ಮಾಡುತ್ತಿದೆ. ಉಷ್ಣಾಂಶ 39 ರಿಂದ 41 ಡಿಗ್ರಿ ಗೆ ಏರುತ್ತಿದೆ, ವಿದ್ಯಾಥರ್ಿಗಳಗೆ ತರಗತಿಗಳಲ್ಲಿ ಕುಳಿತುಕೊಂಡು ಕೇಳಲು ಮತ್ತು ಪ್ರಯೋಗಗಳನ್ನು ನಡೆಸಲು ಕಠಿಣವೆನುಸುತ್ತಿದೆ. ಪ್ರಯೋಗ ಮಾಡುವಾಗ ದೇಹದಿಂದ ಬೇವರು ಬಂದು ದೂಳ ಕುಳಿತ ಗುಳ್ಳೆಗಳು ಏಳಲು ಕಾರಣವಾಗುತ್ತಿದೆ. ಹಾಗಾಗಿ ಕೂಡಲೆ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ರಜೆ ನೀಡಲು ಮುಂದಾಗಬೇಕು.
ಎಸ್.ಎಫ್.ಐ ತಾಲ್ಲುಕಾ ಅಧ್ಯಕ್ಷ ಮಾರುತಿ ಮ್ಯಾಗಳಮನಿ ಮಾತನಾಡಿ, ಬೇಸಿಗೆ ಹೆಚ್ಚಾಗಿರುವುದರಿಂದ ವಿದ್ಯಾಥರ್ಿಗಳ ಕಲಿಕೆಗೆ ಪೂರಕವಾತವರಣವಿಲ್ಲ. ಬೆಳಗ್ಗೆ 8 ಗಂಟೆಗೆ ಕಾಲೇಜನ್ನು ಬದಲಾವಣೆ ಮಾಡಿದರೆ ಪರಿಹಾರ ಸಿಗುವುದಿಲ್ಲ್ಲ. ಹಾಗಾಗಿ ರಜೆ ನೀಡಿ ವಿದ್ಯಾಥರ್ಿಗಳ ವೈಜ್ಞಾನಿಕ ಶಿಕ್ಷಣಕ್ಕೆ ಜಿಲ್ಲಾಡಳಿತ ಮುಂದಾಗಬೇಕು ಎಂದರು.
ಬೇಳಗ್ಗೆ 9 ಗಂಟೆಯಿಂದ ಮದ್ಯಾನ್ಹ 2 ಗಂಟೆಯವರೆಗೆ ವಿವಿಧ ಐ.ಟಿ.ಐ ಕಾಲೇಜುಗಳಿ ತೆರಳಿ ಸಹಿಸಂಗುಹ ಚಳುವಳಿ ನಡೆಸಿದರು. ಸರಕಾರಿ ಐ.ಟಿ.ಐ ಕಾಲೇಜಿನಿಂದ ಆರಂಭಗೊಂಡು. ಸವರ್ೋದಯ ಕಾಲೇಜಿನಲ್ಲಿ ಸಮಾರೋಪ ಗೊಂಡಿತು.ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರಾದ ಯಮನೂರ್ ಹೋಸಪೇಟೆ, ದಾದಾಸಾಹೇಬ್, ರವಿಕುಮಾರ್, ಸಂತೋಷ, ಶ್ರೀನಿವಾಸ, ಪರಿಮಳ, ಗೀತಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)