ಪರೀಕ್ಷಾ ತಯಾರಿ ಖಾಸಗಿ ಶಾಲೆಯಲ್ಲಿ ನಡೆಸಿದ್ದಕ್ಕೆ ಡಿ.ಡಿ.ಪಿ.ಐ ಸ್ಪಷ್ಟಿಕರಣ ನೀಡಲಿ : ಎಸ್.ಎಫ್.ಐ ಆಗ್ರಹ
ಮುಂಬರುವ ಎಸ್.ಎಸ್.ಎಲ್.ಸಿ ಪರಿಕ್ಷೆಯ ಸಿದ್ದತೆಗಾಗಿ ಇಂದು ನಗರದ ಎಸ್.ಎಫ್.ಎಸ್ ಖಾಸಗಿ ಶಾಲೆಯಲ್ಲಿ ಡಿ.ಡಿ.ಪಿ.ಐ ನೇತ್ರತ್ವದಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕಿ ಶಿಕ್ಷಣಾಧಿಕಾರಿಗಳ ಸಭೆ ನಡೆಸಲಾಗಿದೆ. ಸಭೆಯನ್ನು ಖಾಸಗಿ ಶಾಲೆಯಲ್ಲಿ ನಡೆಸಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಆದರೆ ಅವರು ಶಿಕ್ಷಣ ಇಲಾಖೆಯ ಉಪನಿದರ್ೆಶಕರಾಗಿರುವುದರಿಂದ ಯಾವ ಶಾಲೆಯಲ್ಲಾದರೂ ಸಭೆ ನಡೆಸಬಹುದಾಗಿದೆ. ಆದಾಗ್ಯೂ ಹಲವಾರು ಪ್ರಶ್ನೆಗಳು ವಿದ್ಯಾಥರ್ಿ ಸಮುದಾಯವನ್ನು ಕಾಡುತ್ತಿವೆ. ಜಿಲ್ಲಾಧಿಕಾರಿಗಳ ಕಾಯರ್ಾಲಯದಲ್ಲಿ ದೊಡ್ಡಸಭಾಂಗಣವಿದೆ. ಸಾಕಷ್ಟು ಸರಕಾರಿ ಶಾಲೆಗಳಿವೆ. ಇವೆಲ್ಲವನ್ನು ಬಿಟ್ಟು ಖಾಸಗಿ ಶಾಲೆಯಲ್ಲಿ ಸಭೆ ನಡೆಸುವಂತಹ ಅನಿವಾರ್ಯತೆ ಎನಿತ್ತು ಎಂಬುದಕ್ಕೆ ಡಿ.ಡಿ.ಪಿ.ಐ ಉತ್ತರ ನೀಡಬೇಕು ಎಂದು ಎಸ್.ಎಫ್.ಐ ಆಗ್ರಹಿಸುತ್ತದೆ.
ಈಗಾಗಲೆ ದ್ವೀತಿಯ ಪಿ.ಯು ಪರೀಕ್ಷಾ ಪತ್ರಿಕೆಗಳು ಪರಿಕ್ಷಾ ಅವಧಿಗಿಂತ ಮುಂಚಿತವಾಗಿ ವಿದ್ಯಾಥರ್ಿಗಳ ಕೈ ಸೇರಿರುವ ಪರಿಣಾಮ ಮತ್ತೆ ಪರಿಕ್ಷೆಗಳನ್ನು ಪುನಃ ನಡೆಸುವ ಅವಾಂತರ ಸೃಷ್ಟಿಯಾಗಿ ವಿದ್ಯಾಗಳು ಗೊಂದಲದಲ್ಲಿ ಸಿಲುಕಿದ್ದಾರೆ. ಎಸ್.ಎಸ್.ಎಲ್.ಸಿ ಪರಿಕ್ಷೆಯಲ್ಲಿ ಆ ರೀತಿಯ ಪುನರಾವರ್ತನೆ ಆಗದಂತೆ ಎಚ್ಚರ ವಹಿಸ ಬೇಕಾಗಿದೆ. ಎಸ್.ಎಸ್.ಎಲ್.ಸಿ ಪರಿಕೆಗಳಲ್ಲಿ ನಕಲಿಗೆ ಅವಕಾಶ ನೀಡುವುದು. ಪ್ರಶ್ನೆ ಪತ್ರಕೆ ಔಟ್ ಮಾಡುವುದನ್ನು ಎಸ್.ಎಫ್.ಐ ಸಹಿಸುವುದಿಲ್ಲ. ಹಾಗಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ನ್ಯಾಯಯುತವಾಗಿ ನಡೆಸುವಂತೆ ಶಿಕ್ಷಣ ಇಲಾಖೆಯನ್ನು ಎಸ್.ಎಫ್.ಐ ಒತ್ತಾಯಿಸುತ್ತದೆ. ಎಂದು ಜಿಲ್ಲಾಧ್ಯಕ್ಷ ಗುರುರಾಜ್ ದೇಸಾಯಿ ಮುಖಂಡರಾದ ಸುಬಾನ್ ಸೈಯ್ಯದ್. ಮಾರುತಿ ಮ್ಯಾಗಳಮನಿ, ಯಮನೂರ್ ಹೋಸ್ಪೆಟೆ, ದೇವರಾಜ್ ನಾಯಕ್ ಆಗ್ರಹಿಸಿದ್ದರೆ.