ಮಂಗಳವಾರ, ಮೇ 8, 2012

ಡೋನೆಶನಗೆ ಯಾಕಿಲ್ಲ ಕಡಿವಾಣ ? ಡಿ.ಸಿ, ಡಿ.ಡಿ.ಪಿ.ಐ ಎನಾಮಾಡ್ತಾರೆ ! ಡೋನೆಶನ್ ಹಾವಳಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿದೆ. ಕ್ರಮ ಕೈ ಗೊಳ್ಳಬೇಕಾದ ಡಿ.ಸಿ ಮತ್ತು ಡಿ.ಡಿ.ಪಿ.ಐ ಮೌನ ವಹಿಸಿರುವುದರ ಹಿಂದೆ ದೊಡ್ಡ ಲಾಭಿ ನಡೆದಿದೆ ಎಂದು ಭಾರತ ವಿದ್ಯಾಥರ್ಿ ಫೆಡರೇಷನ್ (ಎಸ್.ಎಫ್.ಐ) ಕೊಪ್ಪಳ ಜಿಲ್ಲಾ ಸಮಿತಿಯು ಆರೋಪಿಸಿದೆ. ಡಿ.ಸಿ ಮೌನ : ಇಡೀ ಜಿಲ್ಲೆಯಲ್ಲಿ ವ್ಯಾಪಕವಾಗಿ ಹಬ್ಬಿರುವ ಡೊನೆಶನ್ ಹಾವಳಿಯನ್ನು ನಿಯಂತ್ರಿಸುವ ಶಕ್ತಿ ಜಿಲ್ಲಾಧಿಕಾರಿಗಳಿಗೆ ಇದ್ದರು, ಮೌನ ವಹಿಸಿರುವುದು ಹಲವಾರು ಅನುಮಾನಗಳಿಗೆ ಆಸ್ಪದ ನೀಡುತ್ತಿದೆ. 1983 ರ ಕಾಯ್ದೆಯ ಪ್ರಕಾರ ಡೊನೆಶನ್ ಹಾವಳಿ ನಿಯಂತ್ರಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಖಾಸಗಿ ಶಾಲೆಗಳನ್ನು ನಿಯಂತ್ರಿಸುವ ಅಧಿಕಾರ ನೀಡಿದೆ. ಡೊನೆಶನ್ ಹಾವಳಿ ತಡೆಯುವಂತೆ ಮತ್ತು ಡೊನೆಶನ್ ವಿರೋಧಿ ಸಮಿತಿ ರಚಿಸುವಂತೆ ಒತ್ತಾಯಿಸಿ ಎಪ್ರಿಲ್ 20 ರಂದು ಎಸ್.ಎಫ್.ಐ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಧರಣಿ ನಡೆಸಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿತ್ತು. ಕೊಪ್ಪಳದ ಸ್ವಾಮಿ ವಿವೇಕಾನಂದ ಮತ್ತು ಗಂಗಾವತಿಯ ಚೈತನ್ಯ ಎಂಬ ಖಾಸಗಿ ಶಾಲೆಗಳಲ್ಲಿ 45000 ಕ್ಕು ಹೆಚ್ಚು ಹಣ ಪಡೆದು ವಿದ್ಯಾಥರ್ಿಗಳಿಗೆ ಮತ್ತು ಸರಕಾರಕ್ಕೆ ಮೋಸಮಾಡಲಾಗುತ್ತದೆ ಎಂದು ದಾಖಲೆ ಸಮೇತ ದೂರು ನೀಡಿದರು ಕ್ರಮ ಜರುಗಿಸಲು ಮುಂದಾಗುತ್ತಿಲ್ಲ. ಡೊನೆಶನ್ ವಿರೋಧಿ ಸಮಿತಿ ರಚನೆ ಮಾಡದೆ ಜಿಲ್ಲಾಧಿಕಾರಿಗಳೆ ಕಾನೂನು ಉಲ್ಲಂಘನೆ ಮಾಡುತ್ತಿರುವುದರ ಪರಿಣಾಮವಾಗಿ ಖಾಸಗಿ ಶಾಲೆಗಳಿಗೆ ಭಯ ಇಲ್ಲಂದಂತಾಗಿ ಪಾಲಕರಿಂದ ಹಣವನ್ನು ಮನಸೋ ಇಚ್ಚ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಎಸ್.ಎಫ್.ಐ ಆರೋಪಿಸಿದೆ. ಡಿ.ಡಿ.ಪಿ.ಐ 'ಖಾಸಗಿ' ಪಾಲು : ಖಾಸಗಿ ಶಾಲೆಗಳ ಡೊನೆಶನ್ ಹಾವಳಿಯನ್ನು ನಿಯಂತ್ರಣ ಮಾಡಬೇಕಾಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕರು ತಮಗೆ ಸಂಬಂಧವಿಲ್ಲ ಎಂಬಂತೆ ವಗರ್ಾವಣೆಯಲ್ಲಿ ಬ್ಯೂಸಿಯಾಗಿದ್ದಾರೆ. ಡಿ.ಡಿ.ಪಿ.ಐ ರವರು ಈ ರೀತಿಯ ನಿರ್ಲಕ್ಷ್ಯ ತೋರುತ್ತಿರುವುದಕ್ಕೆ ಕಾರಣ ತಿಳಿದು ಬರುತ್ತಿಲ್ಲ ಹೋರಾಟ ಮಾಡಿ ದಾಖಲೆ ಸಮೇತ ದೂರು ನೀಡಿದರು ಸರಕಾರಿ ನನಿಯಮ ಉಲ್ಲಂಘನೆ ಮಾಡಿರುವ ಆ ಎರಡು ಶಾಲೆಗಳ ಮೇಲೆ ಕ್ರಮ ಕೈಗೊಂಡಿಲ್ಲ. ಬಹುಷಃ ಡಿ.ಡಿ.ಪಿ.ಐ ರವರು ಖಾಸಗಿ ಶಾಲೆಗಳ ದುಡ್ಡಗೆ ತಮ್ಮನ್ನು ಮಾರಿಕೊಂಡಿರಬಹುದೆ ಎಂದು ಎಸ್.ಎಫ್.ಐ ಉಪನಿದರ್ೇಶಕರ ವರ್ತನೆಗೆ ಬೇಸರ ವ್ಯಕ್ತ ಪಡಿಸಿದೆ. ಶಿಕ್ಷಣ ಹಕ್ಕು ಜಾರಿಯಾವಾಗ : ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಮಸೂದೆ 2009 ನ್ನು ಖಾಸಗಿ ಶಾಲೆಗಳಿಗೆ ಅಳವಡಿಸಬೇಕು ಎಂದು ಸುಪ್ರಿಂ ಕೋರ್ಟ ತೀಪರ್ುನೀಡಿರುವ ಹಿನ್ನಲೆಯಲ್ಲಿ 25% ಸೀಟನ್ನು ಬಡ ವಿದ್ಯಾಥರ್ಿಗಳಿಗೆ ಮೀಸಲಿಡಬೇಕು ಆದರೆ ಜಿಲ್ಲೆಯಲ್ಲಿ ಆ ಕಾಯ್ದೆಯನ್ನು ಯಾವ ಖಾಸಗಿ ಶಾಲೆಗಳು ಜಾರಿ ಮಾಡಿಲ್ಲ. ಅದೀಕಾರಿಗಳು ಮತ್ತು ಖಾಸಗಿ ಶಾಲೆಗಳ ಒಳ ಒಪ್ಪಂದ ಮಾಡಿಕೊಂಡು ಮಹತ್ವದ ಯೋಜನೆಯನ್ನು ದಾರಿತಪ್ಪಿಸಿತ್ತಿವೆ. ಕೂಡಲೆ ಶಿಕ್ಷಣ ಹಕ್ಕಯ ಕಾಯ್ದೆ ಜಾರಿಯಾಗಬೇಕು, ಡೊನೆಶನ್ ಹಾವಳಿಗೆ ನಿಯಂತ್ರಣ ಹಾಕಬೇಕು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಡೊನೆಶನ್ ವಿರೋಧಿ ಸಮಿತಿರಚನೆ ಮಾಡಬೇಕು ಎಂದು ಎಸ್.ಎಫ.ಐ ಜಿಲ್ಲಾಧ್ಯಕ್ಷ ಗುರುರಾಜ ದೇಸಾಯು, ಮುಖಂಡರಾದ ಸುಬಾನ್ ಸಯ್ಯದ್, ಹನಮಂತ ಭಜಂತ್ರಿ, ಯಮನೂರ್, ದೇವರಾಜ್ ನಾಯ್ಕರ್ ಒತ್ತಾಯಿಸಿದ್ದಾರೆ.