ಗುರುವಾರ, ಏಪ್ರಿಲ್ 19, 2012
ಐ.ಟಿ.ಐ ಕಾಲೇಜುಗಳಿಗೆ ರಜೆ ನೀಡುವಂತೆ ಒತ್ತಾಯಿಸಿ ಎಸ್.ಎಫ್.ಐ ನಿಂದ ಪ್ರತಿಭಟನೆ
ಐ.ಟಿ.ಐ ಕಾಲೇಜುಗಳಿಗೆ ರಜೆ ನೀಡುವಂತೆ ಒತ್ತಾಯಿಸಿ ಎಸ್.ಎಫ್.ಐ ನಿಂದ ಪ್ರತಿಭಟನೆ
ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು ಪರಿಣಾಮವಾಗಿ ಐ.ಟಿ.ಐ ಕಾಲೇಜುಗಳಿಗೆ ರಜೆ ನೀಡಬೇಕು ಎಂದು ಒತ್ತಾಯಿಸಿ ಭಾರತ ವಿದ್ಯಾಥರ್ಿ ಫೆಡರೇಷನ್(ಎಸ್.ಎಫ್.ಐ) ಇಂದು ಪ್ರತಿಭಟನೆ ನಡೆಸಿತು. ದಿನೆ, ದಿನೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ ವಿದ್ಯಾಥರ್ಿಗಳು ಕುಳಿತುಕೊಂಡು ಪಾಠ ಕೇಳಲು ತೊಂದರೆಯಾಗುತ್ತಿದೆ. ಪ್ರಾಯೋಗಿಕ ಕೆಲಸಮಾಡುವಾಗ ಬೇವರಿನಿಂದ ದುನರ್ಾತ ಸೂಸಿ ಮೈಮೇಲೆ ಗುಳ್ಳೆಗಳು ಎಳುತ್ತಿವೆ. ಬಾಯಲ್ಲಿ ಗುಳ್ಳೆಗಳಾಗುತ್ತಿವೆ ಕಣ್ಣುರಿ, ಊರಿ ಮೂತ್ರ ಹೆಚ್ಚಾಗುತ್ತಿದ್ದು ವಿದ್ಯಾಥರ್ಿಗಳು ಸಂಕಷ್ಟವನ್ನು ಎದುರಿಸುವಂತಾಗಿದೆ. ಈಗಿರುವ ಐ.ಟಿ.ಐ ಕೋರ್ಸ ಅವೈಜ್ಷಾನಿಕವಾಗಿದ್ದು ವೈಜ್ಷಾನಿಕ ಪದ್ದತಿ ಜಾರಿಮಾಡಲು ಸರಕಾರ ಮುಂದಾಗ ಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದರು.
ಐ.ಟಿ.ಐ ವಿದ್ಯಾಥರ್ಿಗಳ ಬಾಕಿ ಇರುವ ಶಿಷ್ಯವೇತನ, ಸ್ಟೈಫಂಡ್ ಬಿಡುಗಡೆ ಮಾಡಬೇಕು. ಪ್ರಥಮ ವರ್ಷದ ಐ.ಟಿ.ಐ ವಿದ್ಯಾಥರ್ಿಗಳಿಗೆ ಪರಿಕ್ಷೆ ನಡೆಸಬೇಕು. ಈಲ್ಲೆಯಲ್ಲಿ ವೃತ್ತಿಪರ ವಸತಿನಿಲಯ ಸ್ಥಾಪಿಸಬೆಕು ಎಂದು ಪ್ರತಿಭಟನೆ ಕಾರರು ಆಗ್ರಹಿಸಿದರು. ಸಾಹಿತ್ಯ ಭವನದಿಂದ ಮರವಣಿಗೆ ಹೋರಟು ನಗರದ ವಿವಿಧ ವೃತ್ತಗಳಲ್ಲಿ ಸಂಚರಿಸಿ ತಹಶಿಲ್ ಕಛೇರಿಯಲ್ಲಿ ಸಮಾವೇಶ ಗೊಂಡು ತಹಶಿಲ್ದಾರರಿಗೆ ಮನವಿ ಅಪರ್ಿಸಿದರು.
ಪ್ರತಿಭಟನೆಯ ನೇತ್ರತ್ವವನ್ನು ಜಿಲ್ಲಾಧ್ಯಕ್ಷ ಗುರುರಾಜ್ ದೇಸಾಯಿ, ಸುಬಾನ್ ಸೈಯ್ಯದ್, ಯಮನೂರ್, ದೇವರಾಜ್ ನಾಯಕ್, ಶ್ರಿನಿವಾಸ ಕಾಸನಕಂಡಿ ಸೇರಿದಂತೆ ಸರಕಾರಿ ಐ.ಟಿ.ಐ, ಸವರ್ೋದಯ, ವಿಶ್ವೇಶ್ವರಯ್ಯ, ಗುರು, ಕರಡಿ, ಐ.ಟಿ.ಐ ಕಾಲೇಜ್ ವಿದ್ಯಾಥರ್ಿಗಳು ಭಾಗವಹಿಸಿದ್ದರು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)