ಮಂಗಳವಾರ, ಏಪ್ರಿಲ್ 3, 2012

ವೃತ್ತಿ ಶಿಕ್ಷಣ ಶುಲ್ಕ ಏರಿಕೆ - ಸಕರ್ಾರ ಖಾಸಗಿ ಕಾಲೇಜುಗಳ ಜೊತೆ ಶಾಮೀಲು; ಎಸ್,ಎಫ್.ಐ. ಪ್ರತಿಭಟನೆ

ವೃತ್ತಿ ಶಿಕ್ಷಣ ಶುಲ್ಕ ಏರಿಕೆ - ಸಕರ್ಾರ ಖಾಸಗಿ ಕಾಲೇಜುಗಳ ಜೊತೆ ಶಾಮೀಲು; ಎಸ್,ಎಫ್.ಐ. ಪ್ರತಿಭಟನೆ. 2012-13 ನೇ ಸಾಲಿನ ವೈದ್ಯಕೀಯ-ದಂತ ವೈದ್ಯಕೀಯ- ಎಂಜಿನಿಯರಿಂಗ್ ಇನ್ನಿತರೆ ವೃತ್ತಿ ಶಿಕ್ಷಣ ಕೊಸರ್್ಗಳ ಶುಲ್ಕವನ್ನು ಶೇಕಡ 10 ರಷ್ಟು ಹೆಚ್ಚಿಸಿರುವ ರಾಜ್ಯ ಸಕರ್ಾರದ ನಿಧರ್ಾರವನ್ನು ವಿರೋಧಿಸಿ ಭಾರತ ವಿದ್ಯಾಥರ್ಿ ಫೆಡರೇಷನ್(ಎಸ್ಎಫ್ಐ) ಕೊಪ್ಪಳ ಜಿಲ್ಲಾ ಸಮಿತಿ ನಗರದ ಬಸ್ ನಿಲ್ಚಾಣದ ಮುಂದೆ ಇಂದು ಪ್ರತಿಭಟನೆ ನಡೆಸಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್.ಎಫ್.ಐ ರಾಜ್ಯ ಉಪಾಧ್ಯಕ್ಷ ಗುರುರಾಜ್ ದೇಸಾಯಿ ಮಾತನಾಡುತ್ತಾ, ಶನಿವಾರ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರವರ ಅಧ್ಯಕ್ಷತೆಯಲ್ಲಿ ಕಾಮೆಡ್-ಕೆ, ಖಾಸಗಿ ಎಂಜಿನಿಯರಿಂಗ್, ಮೆಡಿಕಲ್, ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಗಳ ಪದಾಧಿಕಾರಿಗಳು ಮತ್ತು ಸಕರ್ಾರದ ಹಿರಿಯ ಅಧಿಕಾರಿಗಳನ್ನೊಳಗೊಂಡ ಸಭೆಯಲ್ಲಿ ಈ ತೀಮರ್ಾನ ಕೈಗೊಳ್ಳುವ ಮೂಲಕ ರಾಜ್ಯ ಸಕರ್ಾರ ಖಾಸಗಿ ಆಡಳಿತ ಮಂಡಳಿಗಳನ್ನು ಇನ್ನಷ್ಟು ಕೊಬ್ಬಿಸುವ ಹಾಗೂ ದಲಿತ-ಹಿಂದುಳಿದ-ಅಲ್ಪಸಂಖ್ಯಾತ-ಮದ್ಯಮ ವರ್ಗದ ವಿದ್ಯಾಥರ್ಿಗಳನ್ನು ವೃತ್ತಿ ಶಿಕ್ಷಣದಿಂದ ವಂಚಿಸಲು ಹೊರಟಿದೆ. ಈಗಾಗಲೇ ನಿಗದಿ ಮಾಡಿರುವ ಶುಲ್ಕಗಳು ಬಡ ವಿದ್ಯಾಥರ್ಿಗಳ ಕೈಗೆಟುಕುವಂತಿಲ್ಲ. ಇಂತಹ ಸಂದರ್ಭದಲ್ಲಿ ಮತ್ತೆ ಶೇ 10 ರಷ್ಟು ಶುಲ್ಕ ಹೆಚ್ಚಳ ಮಾಡಿರುವುದನ್ನು ನೋಡಿದರೆ ರಾಜ್ಯ ಬಿಜೆಪಿ ಸಕರ್ಾರ ಖಾಸಗಿ ಕಾಲೇಜುಗಳ ಜೊತೆ ಶಾಮಿಲಾಗಿರುವುದು ಸ್ಪಷ್ಟವಾಗುತ್ತದೆ. ಬೆಲೆ ಏರಿಕೆ, ಬರಗಾಲದಿಂದ ತತ್ತರಿಸಿರುವ ಜನತೆ ದುಬಾರಿ ಶಿಕ್ಷಣ ಶುಲ್ಕಗಳನ್ನು ನೀಡಿ ತಮ್ಮ ಮಕ್ಕಳನ್ನು ವೃತ್ತಿ ಶಿಕ್ಷಣಕ್ಕೆ ಕಳುಹಿಸಲು ಸಾದ್ಯವಾಗುವುದಿಲ್ಲ. ಕಳೆದ ಎಂಟು ವರ್ಷಗಳಿಂದ ರಾಜ್ಯಸಕರ್ಾರ ವೃತ್ತಿ ಶಿಕ್ಷಣದ ಸಕರ್ಾರಿ ಸೀಟುಗಳನ್ನು ಖಾಸಗಿ ಕಾಲೇಜುಗಳಿಗೆ ಬಿಟ್ಟುಕೊಡುತ್ತಾ, ವಿಪರೀತ ಶುಲ್ಕ ಏರಿಕೆ ಮಾಡುತ್ತಾ ವೃತ್ತಿ ಶಿಕ್ಷಣದ ವ್ಯಾಪಾರಿಕರಣಕ್ಕೆ ಕುಮ್ಮಕ್ಕು ನೀಡಿತು. ಇದರ ಪರಿಣಾಮವೇ ಪ್ರತಿಭಾವಂತ ವಿದ್ಯಾಥರ್ಿಗಳ ಆತ್ಮಹತ್ಯೆ. ಆದ್ದರಿಂದ ರಾಜ್ಯಸಕರ್ಾರ ತಕ್ಷಣ ಶುಲ್ಕ ಏರಿಕೆ ನಿಧರ್ಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು. ಸಕರ್ಾರಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಸೀಟು ಹಂಚಿಕೆ 75 : 25 ರ (ಸಕರ್ಾರಿ : ಖಾಸಗಿ) ಅನುಪಾತದಲ್ಲಿರಬೇಕು. ಈಗಾಗಲೇ ಏರಿಕೆ ಮಾಡಿರುವ ಶುಲ್ಕಗಳನ್ನು ತಕ್ಷಣ ಕಡಿತಗೊಳಿಸಿ ಬಡ ವಿದ್ಯಾಥರ್ಿಗಳ ಕೈಗೆಟುಕುವಂತೆ ಶುಲ್ಕಗಳನ್ನು ನಿಗದಿ ಮಾಡಬೇಕು. ಪ.ಜಾ./ಪ.ವರ್ಗದ ವಿದ್ಯಾಥರ್ಿಗಳ ಶುಲ್ಕ ವಿನಾಯಿತಿ ಹಣವನ್ನು ತಕ್ಷಣ ಬಿಡುಗಡೆಗೊಳಿಸಬೇಕು. ಬರಗಾಲ ಪೀಡಿತ ಜಿಲ್ಲೆಗಳ ವೃತ್ತಿ ಶಿಕ್ಷಣ ವಿದ್ಯಾಥರ್ಿಗಳ ಶುಲ್ಕವನ್ನು ಮನ್ನಾ ಮಾಡಬೇಕು. ಹೊಸ ಎಂಜಿನಿಯರಿಂಗ್, ಮೆಡಿಕಲ್, ಹಾಗೂ ದಂತ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಬೇಕು. ಇರುವ ಸಕರ್ಾರಿ ಕಾಲೇಜುಗಳಿಗೆ ಎಲ್ಲಾ ರೀತಿಯ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂಬ ಬೇಡಿಕೆಗಳುಳ್ಳ ಪಟ್ಟಿಯನ್ನುಮತ್ತು 238 ವಿದ್ಯಾಥರ್ಿಗಳ ಸಹಿಯೊಂದಿಗೆ ಮುಖ್ಯಮಂತ್ರಿಗಳಿಗೆ ನೀಡಲಾಯಿತು. ಸಿಂಪಿ ಲಿಂಗಣ್ಣ ರಸ್ತೆಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಬಸ್ ನಿಲ್ದಾಣ ತಲುಪಿ. ಅಲ್ಲಿ ವಿದ್ಯಾಥರ್ಿಗಳಿಂದ ಸಹಿ ಸಂಗ್ರಹ ಮಾಡಲಾಯಿತು. ಪ್ರತಿಭಟನಾ ನೇತ್ರತ್ವವನ್ನು ಎಸ್.ಎಫ್.ಐ ತಾಲ್ಲೂಕ ಅಧ್ಯಕ್ಷ ಮಾರುತಿ ಮ್ಯಾಗಳಮನಿ, ಕಾರ್ಯದಶರ್ಿ ಸುಬಾನ್ ಸೈಯ್ಯದ್, ದೇವರಾಜ್ ನಾಯಕ್. ಶೇಖರ್ ಎಂ, ಶಬ್ಬೀರ್ಸಾಬ್, ಈರಪ್ಪ ಚಿಲಕಮುಲಕಿ, ಹಾಲಸ್ವಾಮಿ, ಪ್ರವೀಣ, ಸಂತೋಷ ಅನೀಲ್ ಕುಮಾರ್, ಮನೋಹರ್, ಯಮನೂರಪ್ಪ ಸೇರಿದಂತೆ ಅನೇಕ ವಿದ್ಯಾಥರ್ಿಗಳು ಭಾಗವಹಿಸಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ