ಎ.ಬಿ.ವಿ.ಪಿ ಯಾವುದರ ಪರ ?!
-------------------------------
ಅಖಿಲ ಭಾರತ ವಿದ್ಯಾಥರ್ಿ ಪರಿಷತ್(ಎ.ಬಿ.ವಿ.ಪಿ) ಕೇಸರಿಕರಣದ ಬಗ್ಗೆ ಮಾತನಾಡುತ್ತಿದೆ ! ಎನಾಶ್ಚರ್ಯ ಅಲ್ಲವೆ. ಕೋಮಿವಾದಿಗಳಿಂದಲೆ ಕೋಮುವಾದವನ್ನು ವಿರೋಧಿಸುವ ನಾಟಕ ಯಾರಿಗೆ ತಿಳಿಯುವುದಿಲ್ಲವೆಂದು ಎ.ಬಿ.ವಿ.ಪಿ ಅಂದುಕೊಂಡಿದ್ದರೆ ಅದೂ ಅವರ ಮುರ್ಖತನ. ಬೆಂಗಳೂರು ವಿ.ವಿ ಬಿ.ಎ ತೃತೀಯ ಸೆಮಸ್ಟರ್ ಕನ್ನಡ ವಿಷಯದಲ್ಲಿರುವ' ಕೋಮುವಾದ ಮತ್ತು ಮಹಿಳೆ ' ಎಂಬ ಪಾಠವನ್ನು ಪಠ್ಯಪುಸ್ತಕದಿಂದ ತೆಗೆಯುವಂತೆ ಒತ್ತಾಯಿಸಿ ಎ.ಬಿ.ವಿ.ಪಿ ಪ್ರತಿಭಟನೆ ನಡೆಸುತ್ತಿದೆ.
ಎ.ಬಿ.ವಿ.ಪಿ.ಗೆ ಪಠ್ಯಪುಸ್ತಕದಲ್ಲಿನ ಲೇಖನ ಅರ್ಥವಾಗಿಲ್ಲ: ಬಹು ಹಿಂದಿನಿಂದಲು ಬೆಂಗಳೂರು ವಿಶ್ವವಿದ್ಯಾಲಯವು ಕೆಲವು ವೈಚಾರಿಕ-ವೈಜ್ಞಾನಿಕ-ಜೀವಪರ ಸಾಹಿತ್ಯವನ್ನು ಪಠ್ಯವಾಗಿಸುತ್ತಾ ಬರುತ್ತಿರುವುದು ಶ್ಲಾಘನೀಯ. ಪ್ರಸಕ್ತ ಬಿ.ಎ ತೃತೀಯ ಸೆಮಿಸ್ಟರ್ ವಿದ್ಯಾಥರ್ಿಗಳಿಗೆ ಹೆಸರಾಂತ ಲೇಖಕಿಯಾದ ಡಾ|| ಸಬಿಹಾ ಭೂಮಿಗೌಡರವರು ಕನ್ನಡ ವಿಷಯದಲ್ಲಿ ಬರೆದಿರುವ' ಕೋಮುವಾದ ಮತ್ತು ಮಹಿಳೆ ' ಎಂಬ ಪಾಠ ಅರ್ಥಪೂರ್ಣವಾಗಿದೆ. ಈ ಪಾಠವು ಕೋಮುವಾದದ ಕರಾಳ ಮುಖವಾಡವನ್ನು ವಿವರಿಸುತ್ತಾ, ಅದರಲ್ಲೂ ಮಹಿಳೆಯರು ಮತ್ತು ದುರ್ಬಲರು ಹೇಗೆ ಕೋಮುವಾದಕ್ಕೆ ಬಲಿಯಾಗುತ್ತಿದ್ದಾರೆಎಂಬುದನ್ನು ವಿವರಿಸುತ್ತದೆ. ಎಲ್ಲಾ ಧರ್ಮಗಳ ಹೆಸರಿನಲ್ಲಿಕೋಮುವಾದವನ್ನು ವಿರೋಧಿಸಿ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕೆಂದು ವಿವರಿಸಿ ವಿದ್ಯಾಥರ್ಿಗಳು ವಿಶ್ವ ಮಾನವತೆಕಡೆಗೆ ತೆರೆದುಕೊಳ್ಳಲು ಈ ಪಾಠತುಂಬಾ ಸಹಕಾರಿಯಾಗಿದೆ.ದೇವರ ಹೆಸರಿನಲ್ಲಿ ಮಹಿಳೆಯ ಶೋಷಣೆಯನ್ನು ಸಮಥರ್ಿಸುವ ಮತ್ತು ಅಂಧಕಾರದ ಕರಾಳತೆಯನ್ನು ಬಯಲುಗೊಳಿಸುವಲ್ಲಿ ಡಾ|| ಶಶಿಕಲಾ ವೀರಯ್ಯಸ್ವಾಮಿಯವರು ಬರೆದಿರುವ 'ನನ್ನವತಾರ' ಕವನ ಅರ್ಥಪೂರ್ಣ ಹಾಗೂ ತುಂಬಾವಾಸ್ತವತೆಯನ್ನು ಹೇಳುತ್ತದೆ.
ಆದಾಗ್ಯೂ ಎ.ಬಿ.ವಿ.ಪಿ ಪಠ್ಯಪುಸ್ತಕದಲ್ಲಿ ಕೋಮುವಾದೀಕರಣ ಅಳವಡಿಸಲಾಗಿದೆ ಎಂದು ಪ್ರತಿಭಟಿಸುತ್ತಿರುವುದರ ಹಿಂದನ ರಹಸ್ಯ ಮಾತ್ರ ಅವರ ದೇವರಿಗೆ ಗೊತ್ತು. ಅದ್ವಾನಿ, ಸುಷ್ಮಾಸ್ವರಾಜ್, ಉಮಾಭಾರತಿ, ಜಿನ್ನಾ ಇತ್ವಾದಿ ನಾಯಕರ ಕುರಿತು ಪಠ್ಯದಲ್ಲಿ ಪ್ರಸ್ಥಾಪವಿದೆ. ಗುಜಾರಾತ್ ಹತ್ಯಾಕಂಡ ಕುರಿತು ಸತ್ಯ ಶೋದನೆ ವರದಿ ಮಾಡಲಾಗಿದೆ. ಸಿಕ್ ದಂಗೆಯ ಕುರಿತು, ಪಾಕ್ ಮತ್ತು ಬಾಂಗ್ಲಾದೇಶ ದಲ್ಲಿ ಹಿಂದುಗಳ ಮಹಿಳೆಯರ ಮೇಲೆ ನಡೆಯುತ್ತಿರುವದಾಳಿ. ಭಾರತದಲ್ಲಿ ಹಿಂದುಗಳು ಮುಸ್ಲಿಮ್ ಮಹಿಳೆಯರ ಮೇಲೆ ನಡೆಸುತ್ತಿರುವ ದಾಳಿ ಕುರಿತು ಕೋಮುವಾದ ಮುಖವಾಡವನ್ನು ತೋರಿಸಲಾಗಿದೆ. ಗುಜರಾತ್ತ ನಲ್ಲಿ ಮಹಿಳೆಯರ ಮೇಲೆ ನಡೆಸಿರುವ ಅತ್ಯಾಚಾರ, ದಬ್ಬಾಳಿಕೆಯ ನಿಜಾಂಶ ಇದರಲ್ಲಿದೆ. ಎಲ್ಲ ಧರ್ಮಗಳು ಕೋಮುವಾದದ ಹೆಸರಲ್ಲಿ ಹೇಗೆ ಶೋಷಣೆ ಮಾಡುತ್ತವೆ ಎಂಬುದನ್ನಿ ತಿಳಿಸಿ ವಿದ್ಯಾಥರ್ಿಗಳು ಸೌಹಾರ್ಧದಿಂದ ಇರಲು ಸಹಕಾರಿಯಾಗಿರುವ ಮತ್ತು ಪ್ರಗತಿಪರವಾಗಿ ಅವರು ಬಲಗೊಳ್ಳುವಂತೆ ಮಾಡಿರುವ ಲೇಖನವನ್ನು ಎ.ಬಿ.ವಿ.ಪಿ ತೆಗೆದು ಹಾಕಿ ಎನ್ನುವದರ ಹಿಂದೆ ರಾಜಕೀಯ ಷಡ್ಯಂತ್ರವಿದೆ.
ಡಾ|| ಶಶಿಕಲಾ ರವರು ಉತ್ತರ ಕನರ್ಾಟಕದ ಭಾಷೆಯಲ್ಲಿ ಕೃಷ್ಣನ ಕುರಿತಾದ ಕವಿತೆಗಳಿವೆ. ' ಮಹಿಳೆಯರೊಂದಿಗೆ ಚಕ್ಕಂದವಾಡು ಕೃಷ್ಣನೆ ಹೆಚ್ಚ ಸಮಯವನ್ನು ಅವರೊಂದಿಗೆ ಕಳೆಯಬೇಡ. ದೀನ ದಲಿತರನ್ನು, ದುರ್ಬಲರನ್ನು ನುನ್ನ ಕೈ ನಿಂದ ಮೇಲೆತ್ತು. ನಿನ್ನ ಪಿತಾಂಬರದಲ್ಲಿ ಅವರ ಮೈ ಮುಚ್ಚಲು ಸ್ವಲ್ಪ ಬಟ್ಟೆಯನ್ನು ಬಡವರಿಗೆ ನೀಡು ' ಎಂಬ ಸಾಲುಗಳಲ್ಲಿ ಕೋಮುವಾದವನ್ನು ಹುಡುಕಲು ಎ.ಬಿ.ವಿ.ಪಿ ಮುಂದಾಗಿರುವುದೆ. ಅವರ ತಿಳುವಳಿಕೆ ಮತ್ತಯ ಅವರು ಪಠ್ಯವನ್ನು ಹೇಗೆ ಅರ್ಥಮಾಡಿ ಕೊಂಡಿದ್ದಾರೆ ಎಂಬುದು ಅರ್ಥವಾಗುತ್ತದೆ. ತುಂಬಾ ಹಿಂದೆ ಪ್ರಕಟವಾದ ಈ ಸಾಹಿತ್ಯದಕುರಿತು ಚಕಾರಎತ್ತದ ಎ.ಬಿ.ವಿ.ಪಿ ಸಂಘಟನೆ ಈಗ ಪರೀಕ್ಷೆಗೆ ಹತ್ತು ದಿನ ಬಾಕಿ ಉಳಿದಿರುವ ಸಂದರ್ಭದಲ್ಲಿ ಇವುಗಳ ವಿರುದ್ಧಅಪಸ್ವರವೆತ್ತಿ ವಿದ್ಯಾಥರ್ಿಗಳ ಮಧ್ಯೆಗೊಂದಲ ಸೃಷ್ಠಿಸಲು ಹೊರಟಿರುವುದು ಅದರ ಕೋಮುವಾದೀ ಧೋರಣೆ ಹಾಗೂ ವಿದ್ಯಾಥರ್ಿ ವಿರೋಧಿ ನೀತಿಯನ್ನು ಬಯಲುಗೊಳಿಸಿದೆ.
ಎ.ಬಿ.ವಿ.ಪಿ ಯಾವುದರ ಪರ: ರಾಜ್ಯ ಸಕರ್ಾರ ಭ್ರಷ್ಠಾಚಾರದಲ್ಲಿತೊಡಗಿದೆ, ಶಿಕ್ಷಣದ ವ್ಯಾಪಾರಕ್ಕೆಯಥೇಚ್ಛವಾಗಿ ಅವಕಾಶ ಕಲ್ಪಿಸುತ್ತ್ತಿದೆ. ಸಕರ್ಾರಿ ಶಾಲೆ-ಹಾಸ್ಟೆಲ್ಗಳನ್ನು ಮುಚ್ಚಿ ಖಾಸಗೀ ವಿ.ವಿಸ್ಥಾಪಿಸುತ್ತಿದೆ. ಸಕರ್ಾರ ಶಿಕ್ಷಕ-ಉಪನ್ಯಾಸಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ವಿದ್ಯಾಥರ್ಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ಈ ಬೇಡಿಕೆಗಳಿಗೆ ಹೋರಾಟ ಮಾಡುವ ಬದಲು ಎ.ಬಿ.ವಿ.ಪಿ ಧರ್ಮದ ಹೆಸರಿನಲ್ಲಿ ವಿದ್ಯಾಥರ್ಿಗಳನ್ನು ದಿಕ್ಕು ತಪ್ಪಿಸಲು ಹೊರಟಿರುವುದು ಎ.ಬಿ.ವಿ.ಪಿ ಯಾರ ಪರವಾಗಿದೆ ಎಂಬುದು ಗೊತ್ತಾಗಿದೆ. ಕೇದ್ರ ಸರಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಇವರಿಗೆ ರಾಜ್ಯದಲ್ಲಿ ಅವರ 'ಪ್ರೀತಿಯ' ಸರಕಾರ ಮಾಡುತ್ತಿರುವ ಬ್ರಷ್ಟಾಚಾರ ಕಾಣುತ್ತಿಲ್ಲವೆ. ರಾಜ್ಯ ಸರಕಾರದ ಪರ ವಕಾಲತ್ತು ವಹಿಸುವ ಎ.ಬಿ.ವಿ.ಪಿ ಮೊದಲು ಬೆಂಗಳೂರು ವಿ.ವಿ ಧ್ಯೆಯಗಳನ್ನು ಸರಿಯಾಗಿ ಮನದಟ್ಟು ಮಾಡಿಕೊಳ್ಳಲ್ಲಿ. ' ಗುಣಾತ್ಮಕ ಶಿಕ್ಷಣ ನೀಡಿ ಆ ಮೂಲಕ ವೈಜ್ಞಾನಿಕ ಶಿಕ್ಷಣ ನೀಡುತ್ತೆವೆ ಎಂಬ ವಿ.ವಿ ಧ್ಯೆಯವನ್ನು ಹತ್ತಿಕ್ಕತ್ತಿರುವುದನ್ನು ನೋಡಿದರೆ ಇದು ಸವರ್ಾಧಿಕಾರಿ ಧೋರಣೆ ಎಂದೆನಿಸುತ್ತದೆ. ಹಾಗಾಗಿ ಎ.ಬಿ.ವಿ.ಪಿ ವಿದ್ಯಾಥರ್ಿಗಳ ಪರವಾಗಿ ಇದೆಯೋ ಅಥವಾ ರಾಜ್ಯ ಸರಕಾರದ ಬಾಲಂಗೋಚಿ 'ಪುಡಿ' ಸಂಘಟನೆಯೋ ಎಂಬುದನ್ನು ಖಚಿತ ಪಡಿಸಲಿ.
ಈ ಪಠ್ಯಗಳ ಕುರಿತಂತೆ ಸಂಪಾದಕೀಯ ಮಂಡಳಿ ಹಾಗೂ ಉಪನ್ಯಾಸಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕೋಮುವಾದದ ಅಪಾಯಗಳನ್ನು ಮತ್ತು ದೇವರು ಧರ್ಮದ ಹೆಸರಿನ ಪೌರೋಹಿತ ಶಾಹಿಗಳಿಂದ ಸಮಾಜವನ್ನು ರಕ್ಷಿಸುವಕುರಿತು ಅನೇಕ ಅಂಶಗಳನ್ನು ಈ ಪಠ್ಯಗಳಲ್ಲಿ ಕಾಣಿಸಲಾಗಿದೆ. ಹೀಗಾಗಿ ಈ ಪಠ್ಯವನ್ನು ಕೈಬಿಡುವುದಾಗಲೀ ಅಥವಾ ಈ ಲೇಖಕಿಯ ಮೇಲೆ ಕ್ರಮ ಕೈಗೊಳ್ಳುವ ಹೆಸರಿನಲಿ ್ಲಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿಯುವಂತಹ ಯಾವುದೇ ಪ್ರಯತ್ನಗಳಿಗೆ ಬೆಂಗಳೂರು ವಿ.ವಿ ಮುಂದಾಗದೆ, ವಿದ್ಯಾಥರ್ಿಗಳು ಸುಗಮವಾಗಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡಬೇಕೆಂದು ವಿನಂತಿ.
ಲೇಖನ -- ಗುರುರಾಜ್ ಎನ್. ದೇಸಾಯಿ ತಲ್ಲೂರು.9449260183
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ