ಶಾಸಕರಿಲ್ಲದ ವಿಧಾನಸಭಾ ಕ್ಷೇತ್ರ ; ಆತಂಕದಲ್ಲಿ ಜನತೆ
ಶಾಸಕರಿಲ್ಲದ ವಿಧಾನಸಭಾ ಕ್ಷೇತ್ರ ; ಆತಂಕದಲ್ಲಿ ಜನತೆ
ಅರೇ! ಇದೇನಿದೆ ಯಾರಾದರು ಶಾಸಕರು ತೀರಿಕೊಂಡರಾ? ಅಥವಾ ಆಪರೇಷನ್ ಕಮಲಕ್ಕೆ ಬಲಿಯಾದರಾ, ಎಚಿದು ಯೋಚಿಸುತ್ತಿದ್ದೀರಾ, ಖಚಿಡಿತಾ ಅಲ್ಲಾ ಇದು ಶಾಸಕರಿದ್ದು ಇಲ್ಲದಂತಿರುವ ಯಲಬುಗರ್ಾ ವಿಧಾನ ಸಭಾ ಕೇತ್ರದ ಗೋಳಿನ ಕಥೆ. ಬಿ.ಜೆ.ಪಿ ಶಾಸಕ ಈಶಣ್ಣ ಗುಳಗಣ್ಣನವರ್ ಪಾಶ್ರ್ವವಾಯು ರೋಗಕ್ಕೆ ಒಳಗಾಗಿ ಶಾಸಕನಾಗಿ ಕೆಲಸಮಾಡದೆ ಜನತೆಯನ್ನು ಕಷ್ಟದ ಕೂಪಕ್ಕೆ ತಳ್ಳಿದ್ದಾನೆ. 2008 ರ ವಿಧಾನಸಭಾ ಚುಣಾವಣೆಯಲ್ಲಿ ಶಕ್ತಿಮೀರಿ ಪ್ರಚಾರ ಮಾಡಿ, ಸೋಗಲಾಡಿತನದಿಂದ ನಾಟಕ ಮಾಡಿ ಚುನಾವಣೆಯಲ್ಲಿ ಗೆದ್ದು, ಅಮೇರಿಕಾದಲ್ಲಿ ನಡೆದ ಅಕ್ಕ ಸಮ್ಮೇಳನ ನೋಡಲು ಹೋಗಿ ಪಾಶ್ರ್ವವಾಯು ರೋಗಕ್ಕೆ ಒಳಗಾಗಿ ಜನರಿಗೆ ನೀಡಿದ ಆಶ್ವಾಸನೆಗಳನ್ನು ಗಂಟುಕಟ್ಟಿ ಮೂಲೆಗೆ ಬಿಸಾಕಿ ಮಂಚದಮೇಲೆ ಅರಿವಿಲ್ಲದೆ ಮಲಗಿದ್ದಾರೆ.
ಕಣ್ಣೀರಿನ ನಾಟಕ:3 ಭಾರಿ ಚುನಾವಣೆಯಲ್ಲಿ ನಿಂತಿ ಸೋತಿದ್ದ ಈಶಣ್ಣ 2008ರ ಚುನಾವಣೆಯಲ್ಲಿ ರಾಯರಡ್ಡಿಯ ವಿರೋಧಿ ಅಲೆಚಿುನ್ನು ಭರ್ಜರಿಯಾಗಿಯೇ ಬಳಸಿಕೊಂಡ. ಕಾರ್ಯಕರ್ತರ ನಿರ್ಲಕ್ಷ, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು, ಅಹಂಕಾರದ ಮಧದಿಂದ ಕೊಬ್ಬಿಹೋಗಿದ್ದ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿಯನ್ನು ಜನ ಚಿ,ಥೂ ಎಚಿದು ಉಗಳುತ್ತಿದ್ದರು. ಇದನ್ನೆ ಅಸ್ತ್ರವನ್ನಾಗಿಸಿಕೊಂಡ ಬಿಜೆಪಿ ಪ್ರಚಾಎಕ್ಕೆ ಮುಂದಾಯಿತು. ಅದರ ಜೊತೆಯಲ್ಲಿಯೆ ಈಶಣ್ಣ ‘ ನಾನು ಬಹಳನ ದಿನ ಬದುಕಿರುವುದಿಲ್ಲ, ಶಾಸಕಾನಾಗುವುದು ನನ್ನ ಆಸೆ. ಸಾಯುವ ಅಚಿಚಿನಲ್ಲಿರುವ ನನ್ನ ಆಸೆಯನ್ನು ನನಸಾಗಿಸಿ. ನನ್ನ ಹೆಂಡತಿಯ ತಾಳಿ (ಮಾಂಗಲ್ಯ) ಉಳಿಸಿ ಎಚಿದು ಮತದಾರರಲ್ಲಿ ಅತ್ತು ಅತ್ತು ಗೋಗೆರೆದಿದ್ದ. ಸಾಕಷ್ಟು ದುಡ್ಡು, ಹೆಂಡವನ್ನು ಹಳ್ಳಿ ಹಳ್ಳಿಗೆ ಹಂಚಿದ. ರಾಯರೆಡ್ಡಿ ದುರಾಂಕಾರದಿಂದ ಬೇಸತ್ತಿದ್ದತ ಜನತೆ ಈಶಣ್ಣ ಕ್ಪಣ್ಣಿರಿಗೆ ಮನಸೋತು 26000 ಮತಗಳ ಅಚಿತರದಿಂದ ಗೆಲ್ಲಿಸಿದರು. ಸಂಗಪರಿವಾರದ ಬಗ್ಗೆ ಅರಿವಿರದ ಈಶಣ್ಣ ಒಳ್ಳೆ ಕೆಲಸ ಮಾಡುತ್ತಾನೆ ಎಂದು ಜನ ಬಯಿಸಿದ್ದರು. ಆದರೆ ನಡೆದದ್ದೆ ಬೇರೆ. ಗೆದ್ದ ಮೋದಲ ದಿನವೇ ಅಧಿಕಾರಿಗಳನ್ನು ಹೆದೆರಿಸಿ ಲೂಟಿಯಲ್ಲಿ ನಿರತನಾದ. ರೋಗ ಗ್ರಸ್ಥನಾಗಿ ಮಂಚಸೇರಿ ಮಗನನ್ನು ಲೂಟಿಗೆ ಬಿಟ್ಟ.
ಮಗನೆ ಶಾಸಕನಾದ: ಈಶಣ್ಣ ಅನಾರೋಗ್ಯನಾದ ತಕ್ಷಣ ಶಾಸಕರ ನೇತ್ರತ್ವದಲ್ಲಿ ನಡೆಯುವ ಸಭೆ, ಸಮಾರಂಭಗಳಿಗೆ ಶಾಸಕರ ಮಗ ನವೀನ್ ಹಾಜರಾಗತೊಡಗಿದ. ಥೇಟ್ ಪಾಳಿಗಾರಿ ಆಡಳಿತ ಎಂಬಂತೆ ಎಲ್ಲರಿಗೂ ಆರ್ಡರ್ ಮಾಡತೋಡಿಗಿದ. ಸಣ್ಣ ಜನರ ಗುಂಪೊಂದನ್ನು ಕಟ್ಟಿಕೊಂಡು ಪುಡಿ ರೌಡಿಯಂತ ಜನರನ್ನು ಗೋಳಾಯಿಸಿದ. ಪ್ರಶ್ನೆ ಕೇಳಿದ ಜನರನ್ನು, ಪತ್ರಕರ್ತರನ್ನು ಪೋಲಿಸಿಂದ ದಾಳಿಮಾಡಿಸಿ ಅವರು ಹೆದರುವಂತೆ ಮಾಡಿದ. ಸಂವಿಧಾನದ ಮೂಲ ಆಶಯಗಳನ್ನು ಗಾಳಿಗೆತೋರಿ ಅಧಿಕಾರಿಗಳ ಸಭೆಯನ್ನು ಇವನೆ ನಡೆಸತೊಡಗಿದ. ಪ್ರಗತಿಪರ ಜನ ವಿರೋಧಿಸುತ್ತಿದಂತೆಯೆ ಇಂಗು ತಿಂದ ಮಂಗನಂತಾದ. ವಾಲ್ಮಿಕಿ ಜಯಂತಿಯಂದು ಪ.ಡಿ.ಓಗಳ ಸಭೆ ಮಾಡಿ ಸಾರ್ವಜನಿಕವಾಗಿ ಉಗಳಿಸಿಕೊಂಡರು ಇನ್ನು ಇವನು ರೌಡಿ ಆಟ ನುಲ್ಲಿಸಿಲ್ಲ.
ಸಮಸ್ಯೆಗಳ ಸುರಿಮಳೆ: ಯಲಬುಗರ್ಾ ಕೊಪ್ಪಳ ಜಿಲ್ಲೆಯಲ್ಲಿಯೇ ಹಿಂದುಳಿದ ತಾಲ್ಲೂಕು. ಹಳ್ಳಿಗಳಿಗೆ ಸರಿಯಾದ ರಸ್ತೆಗಳಿಲ್ಲ. ಜನರಿಗೆ ದುಡುಯಲು ಕೆಲಸವಿಲ್ಲ, ಸ್ವಂತಭೂಮಿ ಇಲ್ಲ. ಮನೆಗಳಂತೂ ಜನರ ಕೈಗೆಟಕುತ್ತಿಲ್ಲ. ಶಿಕ್ಷಣ ಕೇತ್ರದ ಕಥೆ ಹೇಳತೀರದಾಗಿದೆ. ಕುಡಿಯಲು ಶುದ್ಧವಾದ ನೀರು ಸಿಗುತ್ತಿಲ್ಲ. ಶಾಸಕರಿಲ್ಲದ ಕಾರಣ ಬರುವ ಯೋಜನೆಗಳು ಹಳ್ಳಹಿಡಿದಿವೆ. ಯೋಜನೆಗೆ ಬಂದ ಅನುಧಾನದಲ್ಲಿ ಶಾಸಕರ ಮಗ, ಅಧಿಕಾರಿಗಳು, ಬಿ.ಜೆ.ಪಿ ಕಾರ್ಯಕರ್ತರು ತಮ್ಮ ಪಾಲಿಗಾಗಿ ಕಚ್ಚಾಡುತ್ತಿದ್ದಾರೆ. ಸಿಂಗಟಾಲುರು ಏತ ನೀರಾವರ ರೈತರ ಕನಸಾಗಿಯೆ ಉಳಿಯುತ್ತದೆ. ಇವುಗಳ ಜೊತೆಯಲ್ಲಿ ಬರಗಾಲ ಪೆಟ್ಟು ಜನರನ್ನು ನಿದ್ರೆಗೆಡಿಸಿದೆ. ಎಸ್.ಎಫ್.ಐ, (ಭಾರತ ವಿದ್ಯಾಥರ್ಿ ಫೆಡರೇಷನ್), ಸಿ.ಐ.ಟಿ.ಯು, ಕನ್ನಡ ಪರ ಸಂಘಟನೆ, ದಲಿತ ಸಂಘಟನೆಗಳು ಸೌಲಭ್ಯಕ್ಕಾಗಿ ಹೋರಾಟ ನಡೆಸಿವೆ. ಕಾಂಗ್ರೆಸ್, ಜೆಡಿಎಸ್, ಪಕ್ಷಗಳು ರಣಹ್ಭೆಡಿಗಳಂತೆ ಸುಮ್ಮನೆ ಕುಳಿತಿವೆ. ಜನ ಈಶಣ್ಣನನ್ನು ಗೆಲ್ಲಿಸಿ ತಪ್ಪು ಮಾಡಿದಿವಿ ಎಂದು ಪೇಚಾಡುತ್ತಿದ್ದಾರೆ. ಶಾಸಕರಿಲ್ಲದಿದ್ದರು ಸರಕಾರವಾದರು ನಮ್ಮುನ್ನು ನಮ್ಮ ಸಮಸ್ಯೆಯನ್ನು ಕೇಳಲು ಯಾಕೆ ಮುಂದೆ ಬರುತ್ತಿಲ್ಲ ಎಂದು ಯೋಚಿಸುತ್ತಾ ಕುಳಿತಿದ್ದಾರೆ. ಯಲಬುಗರ್ಾದಂತ ಬರಪೀಡಿತ ಜಿಲ್ಲೆಗೆ ಪಯರ್ಾಯ ಶಕ್ತಿ ಅವಶಚಿುವಾಗಿ ಬೇಕಿದೆ. ಅದಕ್ಕಾಗಿಯೆ ಪ್ರಜಾಸತ್ತಾತ್ಮಕ ಚಳುವಳಿ ಬಲಗೊಳ್ಳ ಬೇಕಿದೆ.
ಗುರುರಾಜ್ ದೇಸಾಯಿ
ಅಮೀನ್ಪುರ. ಕಲಾಂಶಾಲೆ ಎದುರು
ಕೊಪ್ಪಳ.9449260183
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ